ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ - ನಡೆದು ಬಂದ ದಾರಿ
- ಬಿ.ಎಲ್. ರವಿಕುಮಾರ್,
ಅಧ್ಯಕ್ಷರು
EST 1983
SRINGERI, KARNATAKA
ESTABLISHED IN 1983
ಸಂಘೇಶಕ್ತಿಃ ಕಲೌಯುಗೇI ಎಂಬ ನುಡಿಯಂತೆ ಸಂಘಟನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಬ್ರಾಹ ್ಮಣ ಸಮಾಜದ ಬಂಧುಗಳ ಆಚಾರ-ವಿಚಾರಗಳು ಒಂದೇ ಆಗಿದ್ದರೂ ವಿವಿಧ ಉಪಜಾತಿಗಳು, ಮನೋಭಾವಗಳು ಸಂಘಟನೆಯ ಪೂರಕ ವಾತಾವರಣ ಸೃಷ್ಟಿಗೆ ಅಡ್ಡಿಯಾಗಿತ್ತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪ್ರಾರಂಭವಾಗಿ ಬ್ರಾಹ್ಮಣರ ಏಕೀಕರಣಕ್ಕೆ ಶ್ರಮಿಸಲು ಪ್ರಾರಂಭಿಸಿದ ಬೆನ್ನಲ್ಲೇ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಬ್ರಾಹ್ಮಣ ಮಹಾಸಭಾದ ಸಂಘಟನೆಗಳ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಯಿತು. ಈ ಹಿನ್ನೆಲೆಯಲ್ಲಿ ಶೃಂಗೇರಿ ತಾಲ್ಲೂಕಿನಲ್ಲೂ ಕೂಡಾ ಬ್ರಾಹ್ಮಣ ಮಹಾಸಭಾದ ಘಟಕ ಸ್ಥಾಪನೆಯಾಯಿತು.
ಪ್ರಾರಂಭದ ದಿನಗಳಲ್ಲಿ ಕೆಲವೇ ಆಸಕ್ತ ಮನಸ್ಸುಗಳನ್ನು ಸೇರಿಸಿ ಬ್ರಾಹ್ಮಣ ಮಹಾಸಭಾವನ್ನು ಪ್ರಾರಂಭಿಸಿದಾಗ ಪರ-ವಿರೋಧ ಚರ್ಚೆಗಳು ನಡೆದಿದ್ದವು. ೧೯೮೩ಕ್ಕೂ ಮೊದಲು ಕೊಡೂರು ಶ್ರೀಕಂಠ ಭಟ್ಟರ ಅಧ್ಯಕ್ಷತೆಯಲ್ಲಿ ಬ್ರಾಹ್ಮಣ ಮಹಾಸಭಾ ಶೃಂಗೇರಿಯಲ್ಲೂ ಪ್ರಾರಂಭವಾಯಿತು ಎನ್ನುವುದು ದಾಖಲೆಗಳ ಮೂಲಕ ಕಂಡ ಸತ್ಯ. ಸಕ್ರಿಯವಾಗಿರದ ಆ ಸಂಘಟನೆಗೆ ಜಿಲ್ಲಾ ಸಂಘದಿಂದ ಪುನಶ್ಚೇತನ ಕೊಡಲು ಬಂದಿದ್ದ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಟಿ.ಎಂ. ಕೃಷ್ಣಮೂರ್ತಿಗಳು ಹಾಗೂ ಕಾರ್ಯದರ್ಶಿಗಳಾದ ಶ್ರೀ ಎಸ್.ಆರ್. ಗಣೇಶಯ್ಯನವರು, ತಾಲ್ಲೂಕು ಸಂಘಟನೆಗಳ ಮಹತ್ವದ ಕುರಿತಾಗಿ ವಿವರಿಸಿ, ನೂತನ ಕಾರ್ಯಕಾರಿ ಸಮಿತಿಯ ರಚನೆಗೆ ಚಾಲನೆ ನೀಡಿದ್ದರು. ವೇ.ಬ್ರ.ಶ್ರೀ ಕುಲಪತಿ ಶಂಕರನಾರಾಯಣ ಜೋಯ್ಸರವರು ಗೌರವಾಧ್ಯಕ್ಷರಾಗಿ, ಶ್ರೀ ಎನ್.ಎಸ್. ಚಂದ್ರಶೇಖರ್‌ರವರು ಕಾರ್ಯಾಧ್ಯಕ್ಷರಾಗಿ, ಶ್ರೀ ಎನ್.ಎಂ. ಭಿಡೆ, ಶ್ರೀ ಎಂ.ಎಸ್. ಶಿವಶಂಕರ್ ರಾವ್ ಉಪಾಧ್ಯಕ್ಷರಾಗಿ, ಶ್ರೀ ಕೆ.ಆರ್. ಅನಂತಪದ್ಮನಾಭ ಭಟ್, ಶ್ರೀ ಹೆಚ್.ಎಲ್. ಸುಬ್ರಹ್ಮಣ್ಯಂ ಕಾರ್ಯದರ್ಶಿಗಳಾಗಿ, ಶ್ರೀ ಎಸ್. ರಾಮಚಂದ್ರ ಭಟ್ಟ ಸಹಕಾರ್ಯದರ್ಶಿಗಳಾಗಿ ಶ್ರೀ ವಿ. ಸುಬ್ರಹ್ಮಣ್ಯ ಭಟ್ ಖಜಾಂಚಿಗಳಾಗಿ ತಾಲ್ಲೂಕಿನ ಹಿರಿಯ ಬ್ರಾಹ್ಮಣ ಮುಖಂಡರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಿಕೊಳ್ಳಲಾಯಿತು. ನಂತರದ ದಿನಗಳಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ಸಮುದಾಯದ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಯಿತು. ಶಾಖಾ ಸಮಿತಿಗಳನ್ನು ಗ್ರಾಮ ಮಟ್ಟದಲ್ಲಿ ರಚಿಸಲಾಯಿತು. ಶಾಖಾಧ್ಯಕ್ಷರುಗಳನ್ನು ತಾಲ್ಲೂಕು ಸಮಿತಿಯ ವಿಶೇಷ ಆಹ್ವಾನಿತರೆಂದು ಪರಿಗಣಿಸಿ ಪ್ರತಿ ಸಭೆಯಲ್ಲೂ ಶಾಖಾ ರೂಪುರೇಷು ಸಿದ್ಧಪಡಿಸಲಾಯಿತು. ಸತ್ಯನಾರಾಯಣ ವ್ರತ, ಶಂಕರಾಚಾರ್ಯರ ಕುರಿತಾದ ಸಿನಿಮಾ ಪ್ರದರ್ಶನ, ಮಾಸ್ಟರ್ ಹಿರಿಯಣ್ಣಯ್ಯನವರ ನಾಟಕ ಪ್ರದರ್ಶನಗಳ ಮೂಲಕ ದೇಣಿಗೆಯನ್ನು ಸಂಗ್ರಹಿಸಿ-ಉಳಿಸಿ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನ, ಗ್ರಾಮಗಳಲ್ಲಿ ವೇದತರಗತಿಗಳನ್ನು ಪ್ರಾರಂಭಿಸುವುದರ ಮೂಲಕ ಸಂಘಟನೆಗೆ ಉತ್ತಮ ತಳಹದಿಯನ್ನು ಹಾಕಲಾಯಿತು. ಈ ಸಂದರ್ಭದಲ್ಲೂ ಖಾಯಂ ಅಧ್ಯಕ್ಷರಾಗಿದ್ದ ಶ್ರೀ ಎನ್.ಎಸ್. ಚಂದ್ರಶೇಖರ್‌ರವರು ಸಮಾಜದ ಬಗ್ಗೆ ಹೊಂದಿದ್ದ ಕಳಕಳಿ, ಯುವಜನಾಂಗದ ಅಭ್ಯುದಯಕ್ಕೆ ಪಟ್ಟ ಶ್ರಮ ನಿಜಕ್ಕೂ ಶ್ಲಾಘನೀಯ. ಅವರೊಂದಿಗೆ ಕಾರ್ಯದರ್ಶಿಗಳಾಗಿ ಹೆಚ್.ಎಲ್. ಸುಬ್ರಹ್ಮಣ್ಯಂ, ರಾಮಚಂದ್ರ ಭಟ್, ಕೆ.ಎಸ್. ಶ್ರೀಕಂಠರಾವ್, ಮಾವಿನಕಾಡು ರಂಗನಾಥ್ ನೀಡಿದ ಸಹಕಾರ, ಅನುಪಮ ಉಪಾಧ್ಯಕ್ಷರುಗಳಾದ ಉಳುವೆ ಗಣೇಶಯ್ಯ ಮತ್ತು ಶ್ರೀ ಕೆ.ವಿ. ರಾಮಪ್ಪಯ್ಯನವರು ನಿಜವಾದ ಕಳಕಳಿ ಹೊಂದಿದ ನಾಯಕರುಗಳಾಗಿದ್ದರು. ಶೃಂಗೇರಿ ಭಾರತೀ ಬೀದಿಯಲ್ಲಿರುವ ಶಾರದಾ ಸೊಸೈಟಿಯ ಶಾರದಾ ಸಹಕಾರ ಭವನದಲ್ಲಿ ಪ್ರತಿವರ್ಷವೂ ಕಾರ್ಯಕಾರಿ ಸಮಿತಿ ಸಭೆ, ಸರ್ವಸದಸ್ಯರ ಸಭೆಗಳು, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಗಳು ನಡೆದಿದ್ದು, ಶಾರದಾ ಸೊಸೈಟಿಯವರ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕು. ಈ ಸಂದರ್ಭದಲ್ಲೇ ಸಂಘವು ಸ್ವಂತ ನಿವೇಶನ ಹೊಂದಿ ಕಟ್ಟಡವನ್ನು ನಿರ್ಮಿಸಿಕೊಳ್ಳಲೇಬೇಕೆಂಬ ಆಶಯ ಸರ್ವರಲ್ಲೂ ವ್ಯಕ್ತವಾಯಿತು. ನಿವೇಶನಕ್ಕಾಗಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದವರು ಮಾಡಿದ ಪ್ರಯತ್ನಗಳು ಫಲಪ್ರದವಾಗದೆ ಸ್ವಂತ ಕಟ್ಟಡ ಹೊಂದುವ ಸಂಘದ ಆಶಯ ನೆನೆಗುದಿಗೆ ಬಿದ್ದಿತ್ತು. ಆದರೆ ಎನ್.ಎಸ್. ಚಂದ್ರಶೇಖರ್‌ರವರು ಪ್ರತಿ ಸಭೆಯಲ್ಲೂ ಪ್ರಮುಖ ಅಜೆಂಡಾ ಎಂಬಂತೆ ನಿವೇಶನವನ್ನು ಹೊಂದುವ, ಕಟ್ಟಡ ನಿರ್ಮಿಸುವ ಬಗ್ಗೆ ಚರ್ಚೆಗಳನ್ನು ನಡೆಸಿದ್ದರು. ನಿವೇಶನವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳುವುದೇ ಅಥವಾ ಖಾಸಗಿಯವರಿಂದ ಖರೀದಿಸುವುದೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಶುಭಯೋಗ ಶುಭಕಾಲ ಕೂಡಿಬಂದಿತ್ತು. ೧೯೯೩ರಲ್ಲಿ ದಾನಿಗಳಾದ ಹುಲುಗಾರು ಕೆ.ಸಿ. ಶಿವಶಂಕರ ರಾವ್ ಮತ್ತು ಹುಲುಗಾರು ಕುಟುಂಬದವರು ಚರ್ಚಿಸಿ ‘ಶ್ರೀಮತಿ ಹುಲುಗಾರು ಸರಸ್ವತಮ್ಮನವರ ಹೆಸರಿನಲ್ಲಿ ಸುಮಾರು ೮೦*೧೩೦ ಅಡಿ ಅಳತೆಯ ರಾಜಾ ಇಂಡಸ್ಟಿçಯಲ್ ವರ್ಕ್ಸ್ನ ಎದುರುಭಾಗದಲ್ಲಿರುವ ಅವರ ಸ್ವಂತ ಖಾಲಿ ನಿವೇಶನವನ್ನು ಬ್ರಾಹ್ಮಣ ಸಭಾದ ಕಟ್ಟಡ ನಿರ್ಮಾಣಕ್ಕಾಗಿ ದಾನ ನೀಡುವುದಾಗಿ ವಾಗ್ದಾನ ಮಾಡಿದರು. ನಂತರ ಸಂಬಂಧಪಟ್ಟ ದಾನಪತ್ರ ನೋಂದಣಿ ಕಾರ್ಯಗಳು ತ್ವರಿತಗತಿಯಲ್ಲಿ ಮುಗಿದವು. ಸಭೆ ನಡೆಸಲು ಚಿಕ್ಕ ಕಟ್ಟಡವನ್ನು ನಿರ್ಮಿಸಬೇಕೆಂಬ ಇಚ್ಛೆಯಿಂದ ಪ್ರಾರಂಭವಾದ ಈ ಸತತ ಪ್ರಯತ್ನಗಳು ದಾನಿಗಳಾದ ಕೆ.ಸಿ. ಶಿವಶಂಕರ ರಾವ್ ಮತ್ತು ಹುಲುಗಾರು ಕುಟುಂಬದವರ ಉದಾರತೆಯಿಂದ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಸೂಕ್ತವಾದ ನಿವೇಶನವೊಂದು ಸಭೆಗೆ ಕೊಡುಗೆಯಾಗಿ ಬಂದ ಮೇಲೆ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಯಿತು.
೧೯೯೫ರಲ್ಲಿ ಕೆ.ಸಿ. ಶಿವಶಂಕರ ರಾವ್ ಅಧ್ಯಕ್ಷತೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಢೀಕರಣಕ್ಕೆ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಶ್ರೀಮಠದ ಆಡಳಿತಾಧಿಕಾರಿಗಳಾದ ಶ್ರೀ ವಿ.ಆರ್. ಗೌರಿಶಂಕರ್‌ರವರನ್ನು ನೇಮಿಸಿಕೊಳ್ಳಲಾಯಿತು. ಕೆ.ವಿ. ರಾಮಪ್ಪಯ್ಯ ಮತ್ತು ಹೆಚ್.ಜಿ. ನಾಗಭೂಷಣ ರಾವ್ ಉಪಾಧ್ಯಕ್ಷರಾಗಿ, ಕೆ.ಎಸ್. ಶ್ರೀಕಂಠರಾವ್ ಕಾರ್ಯದರ್ಶಿಗಳಾಗಿ, ಉಳುವೆ ಗಣೇಶಯ್ಯ ಖಜಾಂಚಿಗಳಾಗಿ ನಿಯುಕ್ತಿಗೊಂಡರು. ಸದಸ್ಯರುಗಳಾಗಿ ಅನಂತಪದ್ಮನಾಭ ಭಟ್ಟರು, ಹೆಚ್.ಆರ್. ನಾಗಭೂಷಣ ಭಟ್ಟರು ಹಾಲಂದೂರು, ಅಂಬಳೂರು ಸುಬ್ಬರಾವ್, ಪದ್ಮನಾಭರಾವ್ ಕೊಡಿಗೆತೋಟ, ಭೋಜರಾವ್ ಮಾನಗಾರು, ನಾಗರಾಜರಾವ್ ಕದೂರು, ವಿ. ಸುಬ್ರಹ್ಮಣ್ಯ ಭಟ್ಟರು ಶೃಂಗೇರಿ, ಎನ್.ಎಸ್. ಚಂದ್ರಶೇಖರ್, ರಂಗನಾಥ್ ಮಾವಿನಕಾಡು, ಜಯಪ್ರಕಾಶ್ ಮುಗುಳಗೋಡು, ಟಿ.ಎನ್. ಕೃಷ್ಣಭಟ್ಟರು ವಕೀಲರು, ಹೆಚ್.ಎಸ್. ಕೃಷ್ಣಮೂರ್ತಿಗಳು, ಎನ್.ಎಂ. ಭಿಡೆ, ನಂಜುಂಡಭಟ್ಟರು ಹೆಗ್ಗದ್ದೆ, ರಾಮಯ್ಯ ಪಶ್ಚಿಮವಾಹಿನಿ, ಡಾ.ಎಲ್.ಎಂ. ಭಟ್, ಕೊಡೂರು ನರಸಿಂಹಭಟ್ಟರು, ಶ್ರೀಧರ್ ರಾವ್ ಕವಿಲುಕೊಡಿಗೆ, ಮಾಕರ್ಸು ಶೇಷಗಿರಿಯಪ್ಪ, ಸುಬ್ರಹ್ಮಣ್ಯ ಬೆಟ್ಟಗದ್ದೆ, ಆನಂದರಾವ್ ತಲಗಾರು, ಹರಿಕೆ ನಾಗಭೂಷಣ ರಾವ್, ಕೆಸಗೋಡು ಸುಬ್ರಾವ್, ಎನ್.ಪಿ. ಶೃಂಗೇಶ್ವರಯ್ಯನವರನ್ನು ಒಳಗೊಂಡ ಸಮಿತಿ ರಚನೆಗೊಂಡು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶ್ರೀ ಶಾರದಾ ಪೀಠ ಮತ್ತು ಹಲವಾರು ದಾನಿಗಳು ನೀಡಿದ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಲೇ ಬೇಕು. ಶ್ರೀಮಠದ ಆಡಳಿತಾಧಿಕಾರಿಗಳಾದ ವಿ.ಆರ್. ಗೌರಿಶಂಕರ್‌ರವರು ಸಮಿತಿಯ ಪದಾಧಿಕಾರಿಗಳೊಂದಿಗೆ ಕಟ್ಟಡ ನಿರ್ಮಾಣದ ಸಂಪನ್ಮೂಲ ಕ್ರೋಢೀಕರಣಕ್ಕೆ ಮನೆಗಳಿಗೆ ಭೇಟಿಕೊಟ್ಟಿದ್ದು ಧನಸಂಗ್ರಹಣೆಗೆ ಹೊಸ ರೂಪ ಬಂದಿತು. ಹೀಗಿರುವಾಗಲೇ ಧನಸಂಗ್ರಹಣೆಗಾಗಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಾಸನ ಸಮೀಪದ ಹೆದ್ದಾರಿ ಅವಘಡದಲ್ಲಿ ಅಧ್ಯಕ್ಷರಾಗಿದ್ದ ಶ್ರೀ ಯು.ಎಂ. ಗಣೇಶಯ್ಯ ಮತ್ತು ಉಪಾಧ್ಯಕ್ಷರಾಗಿದ್ದ ಶ್ರೀ ಕೆ.ವಿ. ರಾಮಪ್ಪಯ್ಯನವರು ನಿಧನಹೊಂದಿದ್ದು ಬರಸಿಡಿಲು ಬಡಿದಂತಾಗಿತ್ತು. ಕಲ್ಯಾಣ ಮಂಟಪ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಹಿರಿಯ ಚೇತನಗಳು ನಮ್ಮನ್ನಗಲಿದ್ದು ಬ್ರಾಹ್ಮಣ ಮಹಾಸಭೆಗೆ ಆದ ತುಂಬಲಾರದ ನಷ್ಟ.
ನಂತರದ ದಿನಗಳಲ್ಲಿ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಶ್ರೀಧರ್ ರಾವ್‌ರವರು ಸಭೆಯನ್ನು ೧೦ ವರ್ಷಗಳ ಕಾಲ ಮುನ್ನಡೆಸಿದಿರು. ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾಗಿ ಹೆಗ್ಗದ್ದೆ ನಂಜುಂಡಭಟ್ ಮತ್ತು ಜಿ.ಎಂ. ಸತೀಶ್ ಅವರೊಂದಿಗೆ ಶ್ರಮಿಸಿದರು. ೧೯೯೯ರ ಏಪ್ರಿಲ್ ಮಾಹೆ ೨೩ರಂದು ಕಲ್ಯಾಣ ಮಂಟಪದ ಉದ್ಘಾಟನೆ ಶೃಂಗೇರಿ ಜಗದ್ಗುರು ‘ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿ’ಗಳವರ ಅಮೃತಹಸ್ತದಿಂದ ನೆರವೇರಿ ‘ಶ್ರೀ ವಿದ್ಯಾಭಾರತೀ ಭವನ’ ಎಂಬ ಹೆಸರಿನಲ್ಲಿ ಬ್ರಾಹ್ಮಣ ಸಮಾಜದ ಬಂಧುಗಳ ಸೇವೆಗೆ ತೆರೆದು ನಿಂತಿತು. ಆದರೆ ಉದ್ಘಾಟನೆಯ ನಂತರವೂ ಆಗಬೇಕಾದ ಕಾಮಗಾರಿಗಳು ಬಹಳವಿತ್ತು. ವಿವಿಧ ವ್ಯಕ್ತಿಗಳಿಂದ ಪಡೆದ ಸಾಲದ ಮರುಪಾವತಿ, ಕಟ್ಟಡದ ಕಾಮಗಾರಿಗೆ ಅಗತ್ಯ ಸಂಪನ್ಮೂಲ ಕ್ರೋಢೀಕರಣ ಹೀಗೆ ಹಲವಾರು ಸಮಸ್ಯೆಗಳು ಇದ್ದವು. ಇದೆಲ್ಲವನ್ನು ಹಂತ-ಹಂತವಾಗಿ ಪೂರ್ಣಗೊಳಿಸುತ್ತಾ, ದಾನಿಗಳ ಸಹಕಾರವನ್ನು ಪಡೆದುಕೊಳ್ಳುತ್ತಾ, ಹಿಂದಿನವರು ನಡೆಸಿಕೊಂಡು ಬಂದ ಕಾರ್ಯಕ್ರಮಗಳನ್ನು ತಪ್ಪದೇ ನಡೆಸುತ್ತಾ ಬಂದ ಶ್ರೀಧರ್ ರಾವ್ ತಮ್ಮೊಂದಿಗಿದ್ದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಸಹಕಾರದಿಂದ ಅಪೂರ್ಣತೆಯಿಂದ ಪೂರ್ಣತೆಯೆಡೆಗೆ ಎಂಬಂತೆ ಯಶಸ್ಸು ಸಾಧಿಸಿದರು.
ಈಗ ಶ್ರೀ ವಿದ್ಯಾಭಾರತಿಯು ಬ್ರಾಹ್ಮಣ ಮಹಾಸಭಾದ ಸುಸಜ್ಜಿತ ಕಟ್ಟಡವಾಗಿದೆ. ಇಲ್ಲಿ ವರ್ಷಪೂರ್ತಿ ನಡೆಯುವ ಮದುವೆ ಇತ್ಯಾದಿ ಕಾರ್ಯಕ್ರಮಗಳಿಂದ ಬರುವ ಆದಾಯದಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಅಶಕ್ತರಿಗೆ ಸಹಾಯಧನ, ರೋಗಿಗಳಿಗ, ಚಿಕಿತ್ಸೆಗೆ ಸಹಾಯ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜೊತೆಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಖರ್ಚನ್ನು ಭರಿಸುವಿಕೆ, ದಾನಿಗಳ ಸಹಕಾರದಿಂದ ಮಾಸಾಶನ ಯೋಜನೆ, ಅಂತ್ಯ ಸಂಸ್ಕಾರ ನಿಧಿಗಳನ್ನು ಸ್ಥಾಪಿಸಿ, ಅರ್ಹ ಫಲಾನುಭವಿಗಳು ಅದರ ಪ್ರಯೋಜನ ಪಡೆಯುವಂತೆ ಮಾಡಲಾಗಿದೆ. ಹೀಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳಿಗೆ ಸುಮಾರು ೮-೧೦ ಲಕ್ಷ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ‘ಅಸಂಘಟಿತ ಸಮೂಹ’ ಎಂಬ ಹೆಸರಿಗೆ ಅಪವಾದ ಎಂಬಂತೆ ತಾಲ್ಲೂಕಿನ ಎಲ್ಲಾ ಬ್ರಾಹ್ಮಣ ಸಮುದಾಯಗಳನ್ನು ಬ್ರಾಹ್ಮಣ ಮಹಾಸಭಾದಲ್ಲಿ ಸೇರಿ ಕಾರ್ಯಕ್ರಮಗಳನ್ನು ಒಟ್ಟಾಗಿ ನಡೆಸುವ ಪ್ರಯತ್ನ ಇದೆ. ತಾಲ್ಲೂಕಿನ ವಿವಿಧ ಸಂಘಟನೆಗಳಿಗೆ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ನೀಡಿ ಅವುಗಳ ಅಧ್ಯಕ್ಷರುಗಳು ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಖಾಯಂ ಸದಸ್ಯರಾಗಿರುತ್ತಾರೆ.
೧೯೮೩-೮೪ನೇ ಸಾಲಿನಿಂದ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಹಂತ-ಹಂತವಾಗಿ ಬೆಳೆಯುತ್ತಾ, ಸಹಕಾರವನ್ನು ಪಡೆದು ಹೆಮ್ಮರವಾಗಿ ಬೆಳೆದಿದೆ. ಈ ಬೆಳವಣಿಗೆಗೆ ಕಾರಣರಾದ ಸಮಾಜ ಬಂಧುಗಳಿಗೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
೧೯೮೩ ರಲ್ಲಿ ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಸ್ತಿತ್ವಕ್ಕೆ ಬಂದಿದ್ದು, ಕಾರ್ಯಕಾರೀ ಮಂಡಳಿ ವಿವರ ಇಂತಿದೆ.
ಗೌರವಾಧ್ಯಕ್ಷರು : ವೇ.ಬ್ರ.ಶ್ರೀ ಕುಲಪತಿ ಶಂಕರನಾರಾಯಣ ಜೋಯಿಸರು
ಕಾರ್ಯಾಧ್ಯಕ್ಷರು : ಶ್ರೀ ಎನ್.ಎಸ್. ಚಂದ್ರಶೇಖರ್
ಉಪಾಧ್ಯಕ್ಷರು : ಶ್ರೀ ಎಂ.ಎಸ್. ಶಿವಶಂಕರರಾವ್
ಶ್ರೀ ಎನ್.ಎಂ. ಭಿಡೆ
ಕಾರ್ಯದರ್ಶಿಗಳು : ಶ್ರೀ ಕೆ.ಆರ್. ಅನಂತಪದ್ಮನಾಭಭಟ್ಟರು
ಶ್ರೀ ಹೆಚ್.ಎಲ್. ಸುಬ್ರಹ್ಮಣ್ಯಂ
ಸಹಕಾರ್ಯದರ್ಶಿ : ಶ್ರೀ ಎಸ್. ರಾಮಚಂದ್ರಭಟ್ಟರು
ಖಜಾಂಚಿಗಳು : ಶ್ರೀ ವಿ. ಸುಬ್ರಹ್ಮಣ್ಯಭಟ್ಟರು
ಕಾರ್ಯಕಾರಿ ಮಂಡಳಿ ಸದಸ್ಯರು :
ಶ್ರೀ ನಾಗಭೂಷಣಭಟ್ಟರು, ಹಾಲಂದೂರು
ಶ್ರೀ ವಿಶ್ವೇಶ್ವರಭಟ್ಟರು, ಹೊನ್ನೆಕುಡಿಗೆ
ಶ್ರೀ ಶೇಷಗಿರಿಯಪ್ಪ, ಮಘೇಬೈಲು
ಶ್ರೀ ರಾಮಚಂದ್ರರಾವ್, ರಾಜಾನಗರ
ಶ್ರೀ ಸುಬ್ಬಾರಾವ್, ಅಂಬಳೂರು
ಶ್ರೀ ಕಾಮಾಲೆ ಕೆ.ಪಿ. ಶ್ರೀನಿವಾಸರಾವ್
ಶ್ರೀ ಕೆ.ವಿ. ರಾಮಪ್ಪಯ್ಯ
ಶ್ರೀ ಕೊಡೂರು ಶ್ರೀಕಂಠಭಟ್ಟರು
ಶ್ರೀ ಶ್ರೀನಿವಾಸರಾವ್ ಶಿಡ್ಲೆ
ಶ್ರೀ ಟಿ.ಎನ್. ಕೃಷ್ಣಭಟ್ಟರು
ಶ್ರೀ ಕೆ.ಎಸ್. ಬಾಲಕೃಷ್ಣ
ಶ್ರೀ ಎಸ್. ಸುಬ್ಬಾಭಟ್ಟರು
ಶ್ರೀ ಎನ್.ಎಸ್. ರಾಮಸ್ವಾಮಿಗಳು
ಶ್ರೀ ಟಿ. ವೆಂಕಟರಾಮಭಟ್ಟರು (ಕಾಳಿಂಗಭಟ್ಟರು)
ಶ್ರೀ ಎನ್.ಎಸ್. ರಾಮಸ್ವಾಮಿಗಳು
ಶ್ರೀ ಹೆಚ್.ಎಸ್. ವಿಶ್ವನಾಥಭಟ್ಟರು, ಬೆಟ್ಟಗದ್ದೆ
ಶ್ರೀ ಶೇಷಗಿರಿಯಪ್ಪ ಬೆಂಕಿಕೊಡಿಗೆ
1983 ರಿ ಂದ ಇಲ್ಲಿಯವರೆಗೆ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರ ವಿವರಗಳು
ವಿದ್ಯಾಭಾರತೀಭವನ ನಿರ್ಮಾಣ ಸಮಿತಿ
ನಿವೇಶನ ದಾನಿಗಳು : ಶ್ರೀಮತಿ ಸರಸ್ವತಮ್ಮ ಹುಲುಗಾರು
ಉದ್ದೇಶ : ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಚಟುವಟಿಕೆಗಳಿಗಾಗಿ
ನಿರ್ಮಾಣ ಸಮಿತಿಯ ವಿವರ :
ಶ್ರೀ ಕೆ.ಸಿ. ಶಿವಶಂಕರರಾವ್, ಹುಲುಗಾರು
ಶ್ರೀ ಕೆ.ವಿ. ರಾಮಪ್ಪಯ್ಯ
ಶ್ರೀ ನಾಗಭೂಷಣರಾವ್
ಶ್ರೀ ಕೆ.ಎಸ್. ಶ್ರೀಕಂಠರಾವ್
ಶ್ರೀ ಯು.ಎಂ. ಗಣೇಶಯ್ಯ ಉಳುವೆ
ಶ್ರೀ ಅನಂತಪದ್ಮನಾಭಭಟ್ಟರು
ಶ್ರೀ ಹೆಚ್.ಸಿ. ನಾಗಭೂಷಣಭಟ್ಟರು
ಶ್ರೀ ಸುಬ್ರಾವ್ ಎ. ಅಂಬಳೂರು
ಶ್ರೀ ಎಸ್.ಕೆ. ಪದ್ಮನಾಭರಾವ್, ಕೊಡಿಗೆತೋಟ
ಶ್ರೀ ಭೋಜರಾವ್, ಮಾನಗಾರು
ಶ್ರೀ ನಾಗರಾಜರಾವ್, ಕರೂರು
ಶ್ರೀ ವಿ. ಸುಬ್ರಹ್ಮಣ್ಯಭಟ್ಟರು
ಶ್ರೀ ಎನ್.ಎಸ್. ಚಂದ್ರಶೇಖರ್
ಶ್ರೀ ರಂಗನಾಥ್ ಎಂ.ಎಸ್.
ಶ್ರೀ ಎಲ್.ಸಿ. ಜಯಪ್ರಕಾಶ್ ಮುಗಳಗೋಡು
ಶ್ರೀ ಟಿ.ಎನ್. ಕೃಷ್ಣಭಟ್ಟರು, ಶೃಂಗೇರಿ
ಶ್ರೀ ಹೆಚ್.ಎಸ್. ಕೃಷ್ಣಮೂರ್ತಿಗಳು, ವಿದ್ಯಾರಣ್ಯಪುರ
ಶ್ರೀ ಎನ್.ಎಂ. ಭಿಡೆ, ಮೆಣಸೆ
ಶ್ರೀ ನಂಜುಂಡಭಟ್ಟರು, ಹೆಗ್ಗದ್ದೆ
ಶ್ರೀ ರಾಮಯ್ಯ, ಪಶ್ಚಿಮವಾಹಿನಿ
ಡಾ.ಎಲ್.ಎಂ.ಭಟ್ಟರು
ಶ್ರೀ ನರಸಿಂಹಮೂರ್ತಿಗಳು, ಕೊಡೂರು
ಶ್ರೀ ಶೃಂಗೇಶ್ವರಯ್ಯ, ಕೊಡೂರು
ಶ್ರೀ ಶ್ರೀಧರರಾವ್, ಕವಿಲುಕೊಡಿಗೆ
ಶ್ರೀ ಶೇಷಗಿರಿಯಪ್ಪ, ಮಾಕರ್ಸು
ಶ್ರೀ ಸುಬ್ರಹ್ಮಣ್ಯಭಟ್ಟರು, ಬೆಟ್ಟಗದ್ದೆ
ಶ್ರೀ ಆನಂದರಾವ್, ತಲಗಾರು
ಶ್ರೀ ನಾಗಭೂಷಣರಾವ್, ಹರಿಕೆ
ಶ್ರೀ ಸುಬ್ರಾಯ ಕೆ.ಎನ್. ಕೆಸಗೋಡು
ಶ್ರೀ ಎನ್.ಪಿ. ಶೃಂಗೇಶ್ವರಯ್ಯ
ಅಧ್ಯಕ್ಷರು
ಉಪಾಧ್ಯಕ್ಷರು
ಉಪಾಧ್ಯಕ್ಷರು
ಕಾರ್ಯದರ್ಶಿ
ಖಜಾಂಚಿ
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು
ಸದಸ್ಯರು